Posts

ತನ್ನ ಶಕ್ತಿ ಏನು ಅಂತಾ ತೋರಿಸಿ ಕೊಟ್ಟವಳು ನಮ್ಮ ಭಾರತೀಯ ಹೆಣ್ಣು

ಮಹಿಳೆ ಅನಾದಿ ಕಾಲದಿಂದಲೂ ಶೋಷಣೆಯಲ್ಲಿ ಬೆಂದು ಬಂದಿದ್ದಾಳೆ. ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಅವಳನ್ನು ಕಡೆಗಣಿಸುತ್ತಾ ಬಂದಿದ್ದೇವೆ. ನಮ್ಮ ಪೂರ್ವಿಕರು ಹೆಣ್ಣು ಮಕ್ಕಳಿಗೆ ಅಷ್ಟು ಸ್ವಾತಂತ್ರ್ಯ ನೀಡಿರಲಿಲ್ಲ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಯಂತ್ರದ ರೂಪದಲ್ಲಿ ನೋಡಲಾಗುತ್ತಿತ್ತು. ಆಗಿನ ಕಾಲದಲ್ಲಿ ಅಡುಗೆ ಮನೆಗೆ ಸೀಮಿತವಾಗಿದ್ದಳು. ಸ್ವಂತ ನಿರ್ಧಾರ ತೆಗೆದುಕೊಳ್ಳುವಂತಿಲ್ಲ, ಸ್ವತಂತ್ರವಾಗಿ ತಿರುಗಾಡುವಂತಿಲ್ಲ, ಹೆಣ್ಣು ಭೋಗದ ವಸ್ತುವಿನಂತೆ ಕಂಡ ಹಳೆ ಸಮಾಜಕ್ಕೆ ಧಿಕ್ಕಾರ ಹಾಕಿ ತನ್ನ ಶಕ್ತಿ ಏನು ಅಂತಾ ತೋರಿಸಿ ಕೊಟ್ಟವಳು ನಮ್ಮ ಭಾರತೀಯ ಹೆಣ್ಣು ಮಕ್ಕಳು. ಭಾರತೀಯರು ಹೆಣ್ಣನ್ನು ವಿವಿಧ ರೂಪಗಳಲ್ಲಿ ಪೂಜಿಸುತ್ತೇವೆ. ಎಲ್ಲಿ ಹೆಣ್ಣನ್ನು ಪೂಜಿಸಲಾಗುವುದೋ ಅಲ್ಲಿ ದೇವತೆಗಳು ಇರುವರು ಅಂತಾ ಪುರುಷ ಪ್ರಧಾನ ಸಮಾಜ ಹೇಳುತ್ತಾ ಬಂದಿದೆ. ಈಗಲೂ ಹೇಳತ್ತಾ ಹೊರಟಿದೆ. ಆದರೆ ಅವಳನ್ನು ನಾವು ಈಗಲೂ ತಾರತಮ್ಯದಿಂದಲೇ ನೋಡುತ್ತಿವೆ. ಒಂದು ಕುಟುಂಬದಲ್ಲಿ ಹೆಣ್ಣು ಮಗು ಜನಿಸಿತ್ತೇಂದರೆ ಅವಳಿಗೆ ಬಂಧನಗಳು ಪ್ರಾರಂಭವಾಗುತ್ತವೆ. ಈಗಲೂ ಕೆಲವು ಕಡೆ ಅನಾಗರಿಕ ಸಂಪ್ರದಾಯಗಳು ನಡೆಯುತ್ತವೆ. ಇತಿಚೆಗಷ್ಟೆ ಕೇಳಿದ ಒಂದು ಸುದ್ಧಿ ಏನೆಂದರೆ ಗರ್ಭವತಿಯಾದ ಹೆಣ್ಣು ತನ್ನ ಪ್ರಸೂತಿಯನ್ನು ತಾನೇ ಮಾಡಿಕೊಳ್ಳಬೇಕು. ಮೂರು ದಿನಗಳ ಕಾಲ ಹಸು ಕಂದಮ್ಮನ ಜೊತೆ  ತಾಯಿಯೊಬ್ಬಳೆ ಹೊರಗೆ ಇರಬೇಕು.  ಇದಾವ ಸಂಪ್ರದಾಯ ಸ್ವಾಮಿ? ಯಾ...
Recent posts